ಪ್ರತಿಷ್ಠಿತ "ಭಾ. ಕೃ. ಸಂ. ಪ".ನ," ಭಾ. ತೋ.ಸಂ. ಸಂ.ಯ "58ನೇ ಸಂಸ್ಥಾಪನಾ ಅದ್ದೂರಿ ದಿನಾಚರ ಣೆ"ಹೆಸರಘಟ್ಟದ ಸಂಸ್ಥೆಯಲ್ಲಿ ಅರ್ಥಗರ್ಭಿತ ಆಚರಣೆಯನ್ನು ಇಂದು ಗಣ್ಯರಾದ ಡಾ: ಆರ್ಸಿ.ಅಗರ್ವಾ ಲ್ರು ಡಾ:ಸಂಜಯ್ಕುಮಾ ರ್ಸಿಂಗ್, ಡಾ: ಗೋಪ ಕುಮಾರ್, ಡಾ:ತುಷಾರ್ ಕಾಂತಿ ಬೇಹೇರ ರವರು ಉದ್ಘಾಟಿಸಿ; 58 ವರ್ಷ ದಿಂದಲೂ ದೇಶದುದ್ದಕ್ಕೂ, ಸಾರ್ವಜನಿಕರಿಗಾಗಿ, ಮಹತ್ವದ ವೈಜ್ಞಾನಿಕ ಬೆಳವಣಿಗೆ ಸಾಧಿಸಿ ದ್ದಕ್ಕಾಗಿ, ರೈತರಿಗಾಗಿ ಹಲವಾರು ಕೃಷಿ ತಂತ್ರಜ್ಞಾನ ಪರಿಚಯ ತೋಟಗಾರಿಕಾ ಬೆಳೆಗಳ ಹಣ್ಣುಗಳ, ತರಕಾರಿಗಳ& ಹೂವು ಗಳ ಆವಿಷ್ಕಾರದಲ್ಲೂ ಮುಂಚೂಣಿಯಲ್ಲಿ ರುವುದ ಕ್ಕೆ, ಇಡೀ ರೈತರ, ದೇಶದ ಕೃಷಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿ, ಆರ್ಥಿಕ ಅಭಿವೃದ್ದಿಗೂ ಕಾರಣವಾದದ್ದಕ್ಕೆ ದೇಶದ ಎಲ್ಲಾ ಗಣ್ಯರಿಂದ ಪ್ರಶಂಸೆ ವ್ಯಕ್ತಪ ಡಿಸಿದ ರು. ಹಾಗೂ "ಅಮೃತಕಾಲದಲ್ಲಿ ತೋಟಗಾರಿಕಾ ಶಿಕ್ಷಣ & ಉದ್ಯೋಗಾವ ಕಾಶಗಳು" ಬಗ್ಗೆ ಅದ್ಭುತ ವಿವರಣೆ ಕೊಡ ಲಾಯಿತು. ಮೊದಲು ಸ್ನಾತಕ ವಿದ್ಯಾರ್ಥಿ ನಿಲಯ & ರೈತರ ಉನ್ನತ ತರಬೇತಿ ಕೇಂದ್ರಗಳಿಗೆ ಶಂಕುಸ್ಥಾಪನೆ ಗಣ್ಯರು ನೆರವೇರಿಸಿದರು.ಈ ಸಭೆಯಲ್ಲಿ ತಾಂತ್ರಿಕ ಒಡಂ ಬಡಿಕೆಗಳಿಗೆ ಸಹಿ ಮಾಡಿದರು ಮತ್ತು ಐ ಸಿ ಎ ಆರ್ ದ ನವೀನ ತಾಂತ್ರಿಕತೆಯ ಪುಸ್ತಕ ಸವೆನಿಯರ್ಗಳನ್ನು ಬಿಡುಗಡೆಗೊಳಿಸಿದರು. ಅನೇಕ ಕೃಷಿ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಸಭೆಯಲ್ಲಿ ಸಂ ಸ್ಥೆಯ ವಿಜ್ಞಾನಿಗಳು, ನೌಕರರು,ಸ್ನಾತಕ ವಿದ್ಯಾರ್ಥಿಗಳು ಭಾಗವಹಿಸಿ ೫೮ನೆ ಸಂಸ್ಥಾ ಪನಾ ದಿನಾಚರಣೆಯನ್ನು ಯಶಸ್ವಿಗೊಳಿಸಿ ದರು.